info @ KVK DK
Innovations
ಸುಲಭವಾಗಿ ಅಡಿಕೆ ಮರ ಏರುವ ಬೈಕ್ ಮಾದರಿಯ ಯಂತ್ರ: ಶ್ರೀ. ಗಣಪತಿ ಭಟ್‍ರವರ ವಿಶಿಷ್ಟ ಸಾಧನೆ
ಲೇಖಕರು: ಡಾ. ರಶ್ಮಿ ಆರ್, ಡಾ. ರಮೇಶ, ಟಿ. ಜೆ., ಡಾ. ಚೇತನ್ ಎನ್., ಡಾ. ಕೇದಾರನಾಥ, ಡಾ. ನವೀನ್ ಕುಮಾರ್, ಬಿ. ಟಿ., ಮತ್ತು ಡಾ. ಮಲ್ಲಿಕಾರ್ಜುನ ಎಲ್.
ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ
ಭಾ. ಕೃ. ಅ. ಪ. - ಕೃಷಿ ವಿಜ್ಞಾನ ಕೇಂದ್ರ., ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು – 575 502
ಅಡಿಕೆ ಕರ್ನಾಟಕ ರಾಜ್ಯದ ಒಂದು ಪ್ರಮುಖ ವಾಣಿಜ್ಯ ಬೆಳೆ. ಅಡಿಕೆಯನ್ನು ರಾಜ್ಯ ಕರಾವಳಿ, ಘಟ್ಟ ಪ್ರದೇಶ ಮತ್ತು ಮೈದಾನ ಪ್ರದೇಶಗಳಾದ ತುಮಕೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತಿದೆ. ಅಡಿಕೆ ದಕ್ಷಿಣ ಕನ್ನಡ ಜಿಲ್ಲೆಯ ಮುಖ್ಯ ವಾಣಿಜ್ಯ ಬೆಳೆಯಾಗಿದ್ದು, ಜಿಲ್ಲೆಯಾದ್ಯಂತ ಸುಮಾರು 39396 ಹೆಕ್ಟೇರು ಪ್ರದೇಶದಲ್ಲಿ ಬೆಳೆಯುತ್ತಿದ್ದು ಕೃಷಿಕರ ಆರ್ಥಿಕ ಮತ್ತು ಸಾಮಾಜಿಕ ಸುಭದ್ರತೆ ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ.
ಕರಾವಳಿ ಜಿಲ್ಲೆಯಲ್ಲಿ ಅಡಿಕೆ ಕೃಷಿ ಪ್ರಧಾನವಾಗಿದ್ದು ಉತ್ತಮ ಗುಣಮಟ್ಟದ ಅಡಿಕೆಯನ್ನು ಪಡೆಯಲು ಸರಿಯಾದ ಕಾಲಕ್ಕೆ ಅವುಗಳನ್ನು ಕೊಯ್ಯುವುದು ಅವಶ್ಯಕ ಆದರೆ ಸಲೀಸಾಗಿ ಮರ ಏರುವುದು ಸಮಸ್ಯೆ. ಪ್ರಸ್ತುತ ಕರಾವಳಿ ಪ್ರದೇಶದಲ್ಲಿ ಕೂಲಿಕಾರ್ಮಿಕರು ಲಭ್ಯವಿರುವುದಿಲ್ಲ ಕೃಷಿ ಕಾರ್ಯ ಚಟುವಟಿಕೆಗಳನ್ನು ಸಕಾಲದಲ್ಲಿ ಕೈಗೊಳ್ಳಲು ಪ್ರಮುಖ ಸಮಸ್ಯೆಯಾಗಿದೆ. ಇದರ ಪರಿಣಾಮವಾಗಿ ರೈತರು ತಾವು ಬೆಳೆದ ಉತ್ತಮ ಫಸಲನ್ನು ಸೂಕ್ತ ಸಮಯದಲ್ಲಿ ಹಿಡುವಳಿ ಮಾಡಲು ಸಾಧ್ಯವಾಗದೆ ಅಪಾರ ನಷ್ಟವನ್ನು ಅನುಭವಿಸುತ್ತಿದ್ದಾರೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಕನಿಷ್ಠ ಸಂಖೈಯಲ್ಲಿ ಕಾರ್ಮಿಕರನ್ನು ಕಡಿಮೆ ಸಮಯ ಮತ್ತು ಖರ್ಚಿನಲ್ಲಿ ಹಿಡುವಳಿ ಮಾಡಲು ಯಂತ್ರಗಳನ್ನು ಬಳಕೆ ಮಾಡುವುದು ಅನಿವಾರ್ಯ ಮತ್ತು ಸೂಕ್ತವೆನಿಸುತ್ತದೆ. ಅದಕ್ಕಾಗಿ ಮಳೆಗಾಲದಲ್ಲಿ ಅಡಿಕೆ ಮರ ಜಾರುವಂತಹ ಸಂದರ್ಭದಲ್ಲಿಯೂ ಸುಲಭವಾಗಿ ಮರ ಏರುವ ಯಂತ್ರವನ್ನು ಹಲವಾರು ಬದಲಾವಣೆಗಳ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಕೋಮಲೆ ಮನೆಯ ಎನ್. ಕೆ. ನಾರಾಯಣ ಭಟ್ಟರ ಪುತ್ರ, ಶ್ರೀ. ಗಣಪತಿ ಭಟ್‍ರವರು ಅಡಿಕೆ ಮರ ಏರುವ ಯಂತ್ರವನ್ನು ಅವಿಷ್ಕಾರ ಮಾಡಿದ್ದರೆ. ಅಡಿಕೆ ಕೊಯ್ಲ ಮಾಡುವ ಕೊರತೆ ಇರುವ ಈ ಕಾಲದಲ್ಲಿ ಮರ ಏರುವ ಯಂತ್ರವನ್ನು ಹೈಟೆಕ್ ಮಾದರಿಯಲ್ಲಿ ನಿರ್ಮಿಸಿ ಸ್ವಂತ ಬಳಕೆ ರೈತರಿಗೆ ಅನುಕೂಲ ಕಲ್ಪಿಸುವ ಅವರ ಯೋಜನೆ ಎಲ್ಲರಿಂದಲೂ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಅವರು ತಯಾರಿಸಿದ ಮರ ಏರುವ ಯಂತ್ರ ಅತ್ಯಂತ ಸರಳವೂ ಸುಧಾರಿತ ತಂತ್ರಜ್ಞಾನದ್ದೂ ಆಗಿದೆ. ದ್ವಿಚಕ್ರ ವಾಹನದಂತೆ ಸಲೀಸು, ಸೇಫ್ಟಿ ಬೆಲ್ಟ್ ಕಟ್ಟಿಕೊಂಡು ಸ್ವಿಚ್ ಒತ್ತಿದರೆ 30 ಸೆಕೆಂಡುಗಳ ಅಂತರದಲ್ಲಿ ಅಡಿಕೆ ಮರದ ನಿರ್ದಿಷ್ಟ ಭಾಗಕ್ಕೆ ಏರಬಹುದು. ಕೆಳಗೆ ಇಳಿಯುವುದೂ ಇದೇ ಮಾದರಿಯಲ್ಲಿ ಸಲೀಸಾಗಿ ಜಾರಿಕೊಂಡು ಬರಲು ಸಾಧ್ಯವಿದೆ. ಎಲ್ಲಿ ಬೇಕಾದಲ್ಲಿ ನಿಲ್ಲಿಸಿವುದಕ್ಕೆ ಸಾಧ್ಯವಾಗುವಂತದೆ.
ಬೈಕ್ ಮಾದರಿಯ ಯಂತ್ರ: ಸುಮಾರು 28 ಕೆ.ಜಿ. ತೂಕವುಳ್ಳ ಪೆಟ್ರೋಲ್ ಚಾಲಿತ 2 ಸ್ಟ್ರೋಕ್ ಎಂಜಿನ್ ಇರುವ ಬೈಕ್ ಮಾದರಿಯ ಯಂತ್ರ. ಇದರಲ್ಲಿ ಹೈಡ್ರಾಲಿಕ್ ಡಿಸ್ಕ್ ಡ್ರಮ್ ಬ್ರೇಕ್ ಕೂಡ ಹೊಂದಿದೆ. ಗೇರ್ ಬಾಕ್ಸ್ ಮತ್ತು ಡಬಲ್ ಚೈನ್ ಒಳಗೊಂಡಿರುವ ಯಂತ್ರದಲ್ಲಿ ಪುಟ್ಟ ಸೀಟ್ ಸೇಫ್ಟಿ ಬೆಲ್ಟ್ ವ್ಯವಸ್ಥೆಯಿದೆ. 75 ಕೆ.ಜಿ. ತೂಕವುಳ್ಳ ವ್ಯಕ್ತಿ ಸುಲಭವಾಗಿ ಕುಳಿತುಕೊಳ್ಳಬಹುದು. ಎರಡೂ ಕೈ ಹಿಡಿಯಲು ಹ್ಯಾಂಡಲ್, ಬೈಕ್‍ನ ಹ್ಯಾಂಡ್ ಬ್ರೇಕ್ ಮಾದರಿಯಲ್ಲಿರುವ ನಿಯಂತ್ರಣ ವ್ಯವಸ್ಥೆಯೂ ಇಲ್ಲಿದೆ. 1 ಲೀ. ಪೆಟ್ರೋಲ್‍ನಿಂದ ತಲಾ 100 ಅಡಿ ಎತ್ತರದ ಸರಿಸುಮಾರು 90 ಅಡಿಕೆ ಮರ ಏರಬಹುದು.
ಸುರಕ್ಷಿತ ಯಂತ್ರ: ಟೂ ಸ್ಟ್ರೋಕ್ ಎಂಜಿನ್ (ಹಳೆ ಚೇತಕ್ ಸ್ಕೂಟರ್ನಲ್ಲಿರುವಂತೆ) ಆಗಿರುವ ಕಾರಣ, ಪೆಟ್ರೋಲ್ ಮತ್ತು ಆಯಿಲ್ ಸೂಚಿತ ಪ್ರಮಾಣದಲ್ಲಿ ಹಾಕಿ ಸುಸ್ಥಿತಿಯಲ್ಲಿ ಯಂತ್ರವನ್ನಿಡಬೇಕು. ಬಳಿಕ ತಾವೇರುವ ಅಡಿಕೆ ಮರದ ಬುಡಕ್ಕೆ ಜೋಡಿಸಿ ನೇರವಾಗಿ ಮರಕ್ಕೆ ಏರುವುದಕ್ಕೆ ಸುರಕ್ಷಿತ ಯಂತ್ರವಾಗಿದೆ. ಇದರ ವಿನ್ಯಾಸ ಹೇಗಿದೆ ಎಂದರೆ ಯಂತ್ರವನ್ನು ಬಿಡಿಸಿ, ಅಡಿಕೆ ಮರಕ್ಕೆ ತಾಗಿಸಿದರೆ, ಅದನ್ನು ಕಚ್ಚಿಕೊಂಡು ಕುಳಿತುಕೊಳ್ಳುತ್ತದೆ. ಆದಾದ ಬಳಿಕ ಸುರಕ್ಷಿತ ಬೆಲ್ಟ್ ಕಟ್ಟಿಕೊಂಡು ಯಂತ್ರದ ಆಸನದಲ್ಲಿ ಕುಳಿತು, ಸ್ವಿಚ್ ಆದುಮಿದರೆ, ಮೇಲಕ್ಕೇರುತ್ತದೆ. ಅರ್ಧದಲ್ಲಿ ನಿಲ್ಲಿಸಬಹುದು, ಒಮ್ಮೆ ಕೆಳಕ್ಕೆ ಬಂದು ಮತ್ತೆ ಮೇಲಕ್ಕೆ ಹೋಗಲೂಬಹುದು ಸಾಮಾನ್ಯವಾಗಿ 30 ಸೆಕೆಂಡ್‍ಗಳಲ್ಲಿ ಒಂದು ಅಡಿಕೆ ಮರ ಹತ್ತಬಹುದು. ಕೆಲಸ ಮುಗಿಸಿದ ಬಳಿಕ ಯಂತ್ರದ ಬ್ರೇಕ್ ಸಹಾಯದಿಂದ ಹಾಗೆಯೇ ಕೆಳಕ್ಕಿಳಯಬಹುದು. ಈ ಸಂದರ್ಭ ಎಂಜಿನ್ ಆಫ್ ಆದರೂ ಇಳಿಯುವುದಕ್ಕೆ ಸಮಸ್ಯೆ ಇರುವುದಿಲ್ಲ.
ಅಡಿಕೆ ಮರ ಹೊರತು ಅನ್ಯ ಮರಗಳನ್ನು ಈ ಯಂತ್ರದಿಂದ ಏರಲಾಗದು. ಎರಡು ಟಯರ್‍ಗಳ ನಡುವೆ ಯಂತ್ರವು ಭದ್ರವಾಗಿ ಅಡಿಕೆ ಮರವನ್ನು ಹಿಡಿದುಕೊಳ್ಳುತ್ತದೆ. ಇದು ಕಾಳು ಮೆಣಸು ಬಳ್ಳಿ ಬಿಟ್ಟ ಅಡಿಕೆ ಮರಕ್ಕೆ ಸೂಕ್ತವಲ್ಲ. ಈ ಯಂತ್ರದಿಂದ ಅಡಿಕೆ ಕೊಯ್ಯಲು ಹಾಗೂ ಔಷಧ ಸಿಂಪಡಣೆಗೂ ಸಾಧ್ಯವಿದೆ. ಮರ ಏರಲು ಮಾತ್ರ ಇಂಧನ ಬಳಕೆಯಾಗಲಿದ್ದು ಇಳಿಯುವಾಗ ಇಂಧನದ ಅಗತ್ಯವಿಲ್ಲ (ಆಫ್ ಮಾಡಬಹುದು) ಕ್ಷಣ ಮಾತ್ರದಲ್ಲಿ ಒಂದು ಮರದಿಂದ ಇನ್ನೊಂದು ಮರಕ್ಕೆ ಯಂತ್ರ ಅಳವಡಿಸಬಹುದು. ಗಂಡಸರೂ ಮಾತ್ರವಲ್ಲ ಹೆಂಗಸರೂ ಕೂಡ ಅಡಿಕೆ ಮರವನ್ನು ಏರಬಹುದಾದ ನವೀನ ಯಂತ್ರ. ಪಂಚೆ, ಸೀರೆ ನಿಷಿಧ್ದ (ಟಯರ್‍ಗೆ ಸಿಲುಕುವ ಅಪಾಯವಿದೆ).
ಕರಾವಳಿ ಜಿಲ್ಲೆಯಲ್ಲಿ ಅಡಿಕೆ ಕೃಷಿ ಪ್ರಧಾನವಾಗಿದ್ದು ಸುಲಭವಾಗಿ ಮರ ಏರುವುದು ಸಮಸ್ಯೆ. ಅದಕ್ಕಾಗಿ ರೊಬೋಟ್ ಟೆಕ್ನಾಲಜಿಯನ್ನು ಅಧ್ಯಯನ ಮಾಡುತ್ತಿದ್ದ ಸಂದರ್ಭ ಐದು ವರ್ಷಗಳ ಹಿಂದೆ ಈ ಯಂತ್ರ ನಿರ್ಮಿಸುವ ಆಲೋಚನೆ ಬಂತು. ಸತತ ಅಧ್ಯಯನ ಮತ್ತು ಪೂರಕ ಪರಿಕರಗಳನ್ನು ಜೋಡಿಸಿ, ಪ್ರಯೋಗ ನಡೆಸಿದ ಬಳಿಕ ಈಗಷ್ಟೆ ಯಶಸ್ವಿಯಾಗಿದೆ. ಪ್ರಾಯೋಗಿಕ ಹಂತದಲ್ಲಿ ಸುಮಾರು 4 ಲಕ್ಷ ರೂ. ವೆಚ್ಚ ಬಂದಿದೆ. ಆದರೆ 75 ಸಾವಿರ ರೂ. ವೆಚ್ಚದಲ್ಲಿ ಪರಿಷ್ಕ್ರತ ಮಾದರಿಯನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ತನ್ನ ಸ್ವಂತ ಉಪಯೋಗಕ್ಕಾಗಿ ಮಾಡಿದ ಈ ಪ್ರಯೋಗದ ವಿಡಿಯೋ ವ್ಯಾಪಕವಾಗಿ ಪ್ರಚಾರಗೊಳ್ಳುತ್ತಿದಂತೆ ಯಂತ್ರವನ್ನು ವೀಕ್ಷಿಸಲು ದೂರದ ಊರುಗಳಿಂದ ಕೃಷಿಕರು ಬರುತ್ತಿದ್ದಾರೆ ಹಾಗೂ ಇಲ್ಲಿಯವರೆಗೆ 1000 ಯಂತ್ರಗಳು ಮಾರಾಟವಾಗಿರುತ್ತವೆ ಇನ್ನಷ್ಟು ಯಂತ್ರಗಳ ಬೇಡಿಕೆಯನ್ನು ಕೃಷಿಕರು ಇಟ್ಟಿದ್ದಾರೆಂದು ಪ್ರಗತಿಪರ ಕೃಷಿಕರಾದಂತ ಗಣಪತಿ ಭಟ್ ರವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು
ಭಾ. ಕೃ. ಅ. ಪ. - ಕೃಷಿ ವಿಜ್ಞಾನ ಕೇಂದ್ರ,
ಮೀನುಗಾರಿಕಾ ಕಾಲೇಜು ಆವರಣ, ಎಕ್ಕುರು, ಕಂಕನಾಡಿ ಅಂಚೆ,
ಮಂಗಳೂರು, ದಕ್ಷಿಣ ಕನ್ನಡ - 575002
www.kvkdk.org , kvkdk@rediffmail.com , 0824-2431872
Value addition of Cashew Apple (click here to View)
Farm Innovators
Farm Innovators of the District
S.No |
Name of Farmer |
Village& Taluk |
Phone No. |
Farm Innovation |
Awards/Recognition |
1 |
Mr.Ganapaththi Bhat |
Sajipamuda Village |
9632774159 |
Innovation in Farm Implements |
- |
2 |
Mr.Raghava Gowda Pallathadka |
Murulya Village |
944725520 |
Innovation of Milking Machine |
National Innovation Foundation State Award for Grass Root Innovation during the year 2005 from President of India-Dr.APJ Abdul Kalam |
3 |
Mr.Shrivas Rao Pailuru |
Amarapadnur Village |
08257-284351 |
Farm Implements Development |
Krishi Pandith Award –IInd place during the year 2004-2005 in Integrated Farming System and Multiple Cropping System |
4 |
Mr.Mahabaleshwar Bhat N. |
Vitla Padnur Village |
- |
Agriculture Machinery Development |
Krishi Pandith Award –IIIrd place during the year 2006-2007 |
5 |
Mr. Canute Aranha |
Kilpadi Village Mangalore Taluk |
9449209179 |
Cashew Apple Juice Extractor |
Best Farmer Award from Department of Agriculture-2017-18 |